ಚುಂಬಿಸಿ ಮುದ್ದಿಸಿದ ಕ್ಷಣಗಳು

ತುಂಗೆಯ ಅಂಬಿಗ ಕಂಡನು
ತಂಗಿಯ ಕುಂಚದಿಂದ ಬಂದ
ಚಂದ್ರನ ಬೆಳದಿಂಗಳ ಚಿತ್ರವೊಂದ್ದನ್ನು.
ಬೆಳದಿಂಗಳ ಅಂದದಲಿ ತಂಗಿಯೊಂದಿಗೆ ನಿಂತಿಹನು
ಮುಂಬರುವ ಬಾಳಸಂಗಾತಿ.

ಮುಂಜಾನೆಯಿಂದ ಸಂಜೆಯವರೆಗು
ದುಡಿದು ಪಡೆದದ್ದು ಪುಡಿ ಕಾಸು,
ಅದರಿಂದಲೆ ಪೂರೈಸಿದನು ಅವಳೆಲ್ಲಾ ಕನಸು,
ಅವನ ಪಾಲಿಗೆ, ಆಕೆ ಇನ್ನು
ಎತ್ತಿ ಆಡಿಸಿದ ಪುಟ್ಟ ಕೂಸು.

ಕಳೆದುಹೋದ ಬಾಲ್ಯದ ದಿನಗಳು ಮರುಕಳಿಸಿತು,
ಕಂಗಳಲಿ ನೂರೆಂಟು ನನಪು ತುಂಬಿಕೊಂಡಿತು.
ಮರೆಯಲಾರದ ಹಿಂದಿನ ನೆನಪುಗಳು;
ಬಡತನದಲ್ಲೂ ಅಂಗಳದಲ್ಲಿ
ಹಂಚಿ ತಿಂದ ತಂಗಳು.
ಮರೆಯಲಾದೀತೆ ಅವನ ಜೀವನದಲ್ಲಿ
ತಂಗಿಯನು ಚುಂಬಿಸಿ ಮುದ್ದಿಸಿದ ಕ್ಷಣಗಳು